24 December, 2008

ಬ್ಲಾಗ್ ಲೋಕದಲ್ಲಿ ನಿಮ್ಮೊಂದಿಗೆ ನನ್ನದೂ ಒಂದು ಸಾಲು


ನಮಸ್ತೇ,


ನಾನು ಯಾರೆಂದು ನನ್ನ profile ನೋಡಿ ತಿಳಿದುಕೊಳ್ಳ ಬಹುದು. ಅಂತ ಕುತೂಹಲವಿದ್ದರೆ.ಅದರ ಬಗ್ಗೆ ಏನೂ ಹೇಳುವುದಿಲ್ಲ.


ಬ್ಲಾಗ್ ದಿಗ್ಗಜರೆಲ್ಲ ಬ್ಲಾಗ್ ಬರವಣಿಗೆಯನ್ನು ನಿಲ್ಲಿಸಿದರು, ಕೆಲವರು ಅಪರೋಪಕೊಮ್ಮೆ ಬರೆಯುತ್ತಿದ್ದಾರೆ. ಅವರ ಬಗ್ಗೆ ನನ್ನ ತಕರಾರೇನೂ ಇಲ್ಲ.ಈ ಹೊತ್ತಲ್ಲಿ ನಾನು ನನ್ನ ಬರವಣಿಗೆಯೆ ಮೊದಲ ಹೆಜ್ಜೆಯನ್ನು ಹಾಕುತ್ತಿದ್ದೇನೆ. ಕಾರಣ ಇಷ್ಟೇ.


ನನ್ನ ಪ್ರೀತಿಯ ಊರನ್ನು ಬಿಟ್ಡು ದೂರದ ಡೆಲ್ಲಿಗೆ ಬಂದು ಅದಾಗಲೇ ಹಲವು ತಿಂಗಳುಗಳೇ ಕಳೆದುವು. ಇಲ್ಲಿ ಇದ್ದಷ್ಟು ದಿನ ಇದೇ ನನ್ನೂರು.ಇದನ್ನೇ ಪ್ರೀತಿಸಬೇಕಷ್ಟೆ. ನನ್ನ ಅಪ್ಪ, ಅಮ್ಮ,ಗೆಳತಿ,ಸಂಬಂಧಿಕರು...ಎಲ್ಲ ಊರಲ್ಲಿ. ಅವರನ್ನಂತೂ ಇಲ್ಲಿಗೆ ಕರೆತರಲು ಸಾಧ್ಯವಿಲ್ಲ. ಅಪರೂಪಕೊಮ್ಮೆ ಡೆಲ್ಲಿ ಪ್ರವಾಸಕ್ಕೆ ಬಂದರೆ ಭೇಟಿಯಾಗಬಹುದು. ನಂಗೂ ಪದೇ ಪದೇ ಹೋಗೋದು ಅಸಾಧ್ಯ.


ಅತಿಯಾಗಿ ಮಾತಾಡಿಸಿಕೊಂಡು ಹೋಗೋ ಸ್ವಭಾವ ನನ್ನದಲ್ಲ. ಆದ್ದರಿಂದ ಸರಿಯಾಗಿ ಹಿಂದಿ ಭಾಷೆ ಬಾರದ ನಂಗೆ ಇಲ್ಲಿ ಹೇಳಿಕೊಳ್ಳಲು,ಮಾತಾಡಲು ಗೆಳಯ/ತಿ ಯರಿಲ್ಲ. ಒಬ್ಬ ಮನುಷ್ಯ ಎಷ್ಟು ದಿನ ಪುಸ್ತಕ ಓದುತ್ತಾ, ಟಿ.ವಿ. ನೋಡುತ್ತಾ, ಎಲ್ಲೂ ಹೋಗದೆ ಮನೆಯಲ್ಲಿ ಕಾಲ ಕಳೆಯಬಹುದು? ನಾನು ಕಲಿತ ವಿಶಯಕ್ಕೆ ಇಲ್ಲಿ ಕೆಲಸ ಸಿಗುವುದು ಅಷ್ಟು ಸುಲಭವಲ್ಲ...! ಅಲ್ಲದೆ ಸಂಸಾರ ಅಂದ ಮೇಲೆ ಹೆಣ್ಣಿಗೆ ಅನಿವಾರ್ಯವಾಗಿ ಒಂದಷ್ಟು restrictions! ಅದು ನಮಗೆ ನಾವೇ ಹಾಕಿಕೊಳ್ಳುವುದೋ? ಅಥವಾ ಈ ಸಮಾಜದ ಕೊಡುಗೆಯೋ? ಗೊತ್ತಿಲ್ಲ. ಏನು ನನ್ನನ್ನು ಸ್ತ್ರೀವಾದಿ ಅಂತ ತಿಳ್ಕೊಂಡ್ರಾ? ಖಂಡಿತ ಇಲ್ಲ. ನನಗೆ ಯಾವ 'ಇಸಂ'ಗಳಲ್ಲಿ ಗುರಿತಿಸಿಕೊಳ್ಳುವ ಮನಸ್ಸಿಲ್ಲ.


ಸಾಕಾಯಿತು ನಂಗೆ.ಅದಕ್ಕೇ ಈ ನಿರ್ಜೀವ ವಸ್ತುವಿನ ಮುಖಾಂತರ ನಿಮ್ಮಂತ ಒಂದಷ್ಟು ಗೆಳಯ/ತಿ ಯರು ಪರಿಚಯವಾಗಬಹುದು ಎಂಬ ಹಂಬಲ, ಕುತೂಹಲದೊಂದಿಗೆ ಬ್ಲಾಗ್ ಆರಂಭಿಸುತ್ತಿದ್ದೇನೆ. ಎಷ್ಟು ದಿನ? ಎಲ್ಲಿಯವರೆಗೆ? ಗ್ಯಾರೆಂಟಿ ಕೊಡಲಾರೆ. ನನ್ನ ಮನಸ್ಸಿಗೆ ತೋಚಿದ್ದನ್ನು ನಿಮ್ಮ ಮುಂದಿಡುವ ಪ್ರಯತ್ನ...ಅಷ್ಟೇ.

2 comments:

VENU VINOD said...

ಸಮಯ ವಿಸ್ತರಿಸುತ್ತಾ ಹೋದಂತೆ ಅಪರಿಚಿತ ಸ್ಥಳಗಳಲ್ಲೂ ಬೇಕಾದಷ್ಟು ಆತ್ಮೀಯರು ಸಿಕ್ಕೇ ಸಿಗುತ್ತಾರೆ...ಹಾಗಾಗಿ ಈಗ ನೀವಿರುವ ಪ್ರದೇಶವನ್ನು ಪ್ರೀತಿಸಿ...ಗೆಳೆಯ/ಗೆಳತಿಯರು ಸಿಗುತ್ತಾರೆ....ಉದ್ಯೋಗ ಸಿಕ್ಕರೂ ಸಿಗಬಹುದು

Pratap said...

Hi Sindhu,

Ninna modalane blog wodide aanu indu. Bare 25 nimisha bekaatu yenage wodule :)